➤ ಅರಣ್ಯ ಇಲಾಖೆಯ ನರ್ಸರಿಗೆ ಎಂಟ್ರಿ ಕೊಟ್ಟ ಕಾಡಾನೆಗಳು

(ನ್ಯೂಸ್ ಕಡಬ) newskadaba.com. ಕಡಬ. ಫೆ.25.  ಇಬ್ಬರನ್ನು ಕೊಂದ ಕಾಡಾನೆಯನ್ನು ಸೆರೆ  ಹಿಡಿದು ನಾಗರಹೊಳೆ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕೊಂಡೊಯ್ಯಲಾಗಿದೆ. ಸ್ಥಳದಲ್ಲಿರುವ ಮೂರು ಸಾಕಾನೆಗಳು ವಿಶ್ರಾಂತಿ ಪಡೆಯುತ್ತಿದ್ದು,  ಸಿಬಂದಿಗಳು ಕಾಡಾನೆ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

ಈ ನಡುವೆ  ಗುರುವಾರ ರಾತ್ರಿ ಗುಂಡ್ಯದ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ಲಗ್ಗೆ ಇಟ್ಟಿವೆ ಎಂದು  ಮಾಹಿತಿ ತಿಳಿದುಬಂದಿದೆ.  ರಾತ್ರಿ ಕಾಡಾನೆ ಲಗ್ಗೆ ಇಟ್ಟ ಪ್ರದೇಶದ ಮಾಹಿತಿ ಪಡೆದು ಆ ಭಾಗದಲ್ಲಿ ಪತ್ತೆ ಕಾರ್ಯಾಚರಣೆ ತಂಡ ತನ್ನ ಕೆಲಸ ಮುಂದುವರಿಸಿ ಕಾಡಾನೆಯ ಇರುವಿಕೆ ಕಂಡುಕೊಳ್ಳುವತ್ತ ಕಾರ್ಯ ಮಾಡಿದೆ ಎಂದು ತಿಳಿದುಬಂದಿದೆ.  ಮೂರು ಸಾಕಾನೆಗಳನ್ನು ಪೇರಡ್ಕ ಬಳಿಯ ಶಿಬಿರದಿಂದ ನೆಟ್ಟಣದ ಕೇಂದ್ರೀಯ ಮರ ಸಂಗ್ರಹಣ ಘಟಕಕ್ಕೆ ಕರೆದೊಯ್ದು ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ.

Scroll to Top