➤ ಬೀದಿ ನಾಯಿಗಳಿಗೆ ಊಟ ಹಾಕಿದ್ದಕ್ಕೆ ಮಹಿಳಾ ಟೆಕ್ಕಿ ಮೇಲೆ ಹಲ್ಲೆ!

(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.25.  ಬೀದಿ ನಾಯಿಗಳಿಗೆ ಊಟ ಹಾಕಿದ್ದಕ್ಕೆ ಮಹಿಳಾ ಟೆಕ್ಕಿ ಮೇಲೆ ಇಬ್ಬರು ಪುರುಷರು ಹಲ್ಲೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಿನ್ನೆ ನಡೆದಿದೆ. ಶ್ರೀ ಬೃಂದಾವನ್ ಲೇಔಟ್ ನಲ್ಲಿರುವ ವರುಣ್ ಅಪಾರ್ಟ್ ಮೆಂಟ್ ನಿವಾಸಿ ಮೀರಾ ತಿವಾರಿ ಹಲ್ಲೆಗೊಳಗಾಗಿದ್ದು, ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಡಾವಣೆಯ ಒಳಗೆ 17 ಬೀದಿನಾಯಿಗಳು ಹಾಗೂ ಬಡಾವಣೆಯ ಹೊರಗೆ 16 ಬೀದಿ ನಾಯಿಗಳಿವೆ. ನನ್ನ ಸ್ವಂತ ಖರ್ಚಿನಿಂದ ನಾನು ಅವುಗಳಿಗೆ ಆಹಾರ ನೀಡುತ್ತೇನೆ. ಇದು ಬಡಾವಣೆಯ ಕೆಲವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ದಾಳಿಯ ಸಂಜೆ, ನಾನು ಮೊಟ್ಟೆಗಳನ್ನು ಖರೀದಿಸಲು ಹತ್ತಿರದ ಪ್ರಾವಿಷನ್ ಸ್ಟೋರ್‌ಗೆ ಹೋದಾಗ ನಾಯಿಗಳು ನನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದವು. ಶೆಡ್‌ನಲ್ಲಿ ಕುಳಿತಿದ್ದ ಇಬ್ಬರು ಆರೋಪಿಗಳು ನನ್ನನ್ನು ಹಿಂಬಾಲಿಸಿ ನಾಯಿಗಳಿಗೆ ಆಹಾರ ನೀಡಿದ್ದಕ್ಕಾಗಿ ನಿಂದಿಸಲು ಪ್ರಾರಂಭಿಸಿದರು ಎಂದು ಮೀರಾ ಹೇಳಿದರು.

Also Read  "ನನ್ನ ಗಂಡ SDPI ಪಕ್ಷದಲ್ಲಿ ಸಕ್ರಿಯನಾಗಿದ್ದ ಹೊರತು ಅಪರಾಧಿಯಲ್ಲ" ➤ ಶಪೀಕ್ ಪತ್ನಿ ಹೇಳಿಕೆ

ಆರೋಪಿಗಳಲ್ಲಿ ಒಬ್ಬ ಕುಡುಗೋಲು ಹಿಡಿದಿದ್ದ, ಮತ್ತೊಬ್ಬರು ಬೇರೆ ಆಯುಧ ಹಿಡಿದಿದ್ದ. ಸಂತ್ರಸ್ತೆಯ ಕನ್ನಡಕವನ್ನು ಕಿತ್ತು ಒಡೆದ ನಂತರ ಇಬ್ಬರೂ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!
Scroll to Top