ಸುರತ್ಕಲ್: ಮಹಿಳೆಯ ದ್ವನಿ ಅನುಕರಣೆ ಮಾಡಿ ಬ್ಲ್ಯಾಕ್ ಮೇಲ್ !    ➤  ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಸುರತ್ಕಲ್, ಫೆ.25. ಮಹಿಳೆಯ ದ್ವನಿಯನ್ನು ಅನುಕರಣೆ ಮಾಡಿ ವ್ಯಕ್ತಿಗೆ ಕರೆ ಮಾಡಿ ಬ್ಲ್ಯಾಕ್ ಮೇಲೆ ಹಣ ಪೀಕಿಸಿದ ವ್ಯಕ್ತಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಮೂಡುಬಿದಿರೆ ಸಮೀಪದ ಬಿರಾವು ಧನಂಜಯ ಆರೋಪಿ ಎಂದು ಗುರುತಿಸಲಾಗಿದೆ.

ಬೈಕಂಪಾಡಿಯ ಕಂಪೆನಿಯೊಂದರ ಉದ್ಯೋಗಿ ಹೊಸಬೆಟ್ಟು ನಿವಾಸಿಯೋರ್ವರಿಗೆ ಉಷಾ ಎಂದು ಪರಿಚಯಿಸಿಕೊಂಡು  ಹೆಣ್ಣಿನ ಸ್ವರದಲ್ಲಿ ಕರೆ, ವೀಡಿಯೋ ಕಾಲ್‌ ಮಾಡಿ, ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪ ಈತನ ಮೇಲಿದೆ.

error: Content is protected !!