(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಫೆ.24. ರಾಜಧಾನಿ ದಿಲ್ಲಿಯ ನಂಗ್ಲೋಯಿ ಪ್ರದೇಶದಲ್ಲಿ ನಡೆದಿದ್ದ 11 ವರ್ಷದ ಬಾಲಕಿಯ ಆಘಾತಕಾರಿ ಕೊಲೆ ಪ್ರಕರಣ, ಮಿಸ್ಡ್ ಕಾಲ್ ಒಂದರಿಂದ ಬಗೆಹರಿದಿದೆ. ಬಾಲಕಿ ನಾಪತ್ತೆಯಾದ ದಿನವೇ ಆಕೆಯ ತಾಯಿಯ ಮೊಬೈಲ್ ಫೋನ್‌ಗೆ ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿತ್ತು.
ಅಪಹರಣಗೊಂಡು ಹತ್ಯೆಯಾದ ಬಾಲಕಿಯು, ಆ ದಿನ ಬೆಳಿಗ್ಗೆ ಶಾಲೆಗೆಂದು ಹೊರಟವಳು ನಾಪತ್ತೆಯಾಗಿದ್ದಳು. ಅದೇ ದಿನ ಬೆಳಿಗ್ಗೆ 11.50ರ ಸುಮಾರಿಗೆ ಆಕೆಯ ತಾಯಿಗೆ ಮಿಸ್ಡ್ ಕಾಲ್ ಬಂದಿತ್ತು. ಅದಕ್ಕೆ ಅವರು ಮರಳಿ ಕರೆ ಮಾಡಿದಾಗ, ಆ ನಂಬರ್ ಸ್ವಿಚ್ ಆಫ್ ಎಂದು ಬಂದಿತ್ತು.