ರೂಪ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸ್ ಕಮೀಷನರ್ ಗೆ ರೋಹಿಣಿ ಪತ್ರ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.24. ಯಾವುದೇ ಮಾನ ಹಾನಿಕಾರ ಹೇಳಿಕೆ, ಆರೋಪಗಳನ್ನು ಮಾಡದಂತೆ ಡಿ ರೂಪಾ ಮೌದ್ಗಿಲ್ ಸೇರಿದಂತೆ ಇತರೆ ಪ್ರತಿವಾದಿಗಳ ವಿರುದ್ಧ ರೋಹಿಣಿ ಸಿಂಧೂರಿ ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಐಪಿಎಸ್​ ಡಿ. ರೂಪಾ ಮೌದ್ಗಿಲ್ ವಿರುದ್ಧ ಎಫ್ಐಆರ್  ದಾಖಲಿಸುವಂತೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಪಟ್ಟು ಹಿಡಿದು ನಗರ ಪೊಲೀಸ್ ಆಯುಕ್ತ ಪ್ರತಾಪ್​ ರೆಡ್ಡಿಗೆ ಮತ್ತೆ ಪತ್ರ ಬರೆದಿದ್ದಾರೆ. ಐಟಿ ಕಾಯ್ದೆ, ಐಪಿಸಿ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

Also Read  ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು

ಐಪಿಸಿ ಸೆಕ್ಷನ್‌ 354ಸಿ, 463, 509, 504, 120ಬಿ, 378 ಹಾಗೂ ಐಟಿ ಕಾಯ್ದೆ ಸೆಕ್ಷನ್ 43, 66, 66ಬಿ, 66ಇ, 67, 67ಎ, 71, 72 ಹಾಗೂ 74ರಡಿ ದೂರು ದಾಖಲಿಸುವಂತೆ ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.

 

 

error: Content is protected !!
Scroll to Top