ಮಾ. 2 ಅಥವಾ 3ಕ್ಕೆ ಅಧಿಕಾರಿಗಳಿಂದಲೇ ಬಿಬಿಎಂಪಿ ಬಜೆಟ್‌ ಮಂಡನೆ ಸಾಧ್ಯತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.23. ರಾಜ್ಯ ಸರಕಾರದ ಬಜೆಟ್‌ ಮಂಡನೆಯಾದ ಬೆನ್ನಲ್ಲೇ ಬಿಬಿಎಂಪಿಯು 2023-24ನೇ ಸಾಲಿನ ಆಯವ್ಯಯ ಮಂಡಿಸಲು ಬಿರುಸಿನ ತಯಾರಿ ನಡೆಸಿದೆ. ಮಾರ್ಚ್ 2 ಅಥವಾ 3ರಂದು ಬಜೆಟ್‌ ಮಂಡಿಸುವ ಸಾಧ್ಯತೆಗಳಿವೆ.

ಪಾಲಿಕೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಜನಪ್ರತಿನಿಧಿಗಳ ಆಡಳಿತವಿಲ್ಲ. ಹೀಗಾಗಿ, ಎರಡೂ ವರ್ಷಗಳಿಂದಲೂ ಅಧಿಕಾರಿಗಳೇ ಆಯವ್ಯಯ ಮಂಡಿಸಿ, ಸರಕಾರದಿಂದ ಅನುಮೋದನೆ ಪಡೆದುಕೊಳ್ಳುತ್ತಿದ್ದಾರೆ.

error: Content is protected !!
Scroll to Top