ಉಡುಪಿ: ತಂದೆಯನ್ನು ಕೊಂದ ಮಗನಿಗೆ ಮೂರು ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ !

(ನ್ಯೂಸ್ ಕಡಬ)newskadaba.com ಉಡುಪಿ, ಫೆ.23. ಮೂರು ವರ್ಷಗಳ ಹಿಂದೆ ತಂದೆಯನ್ನು ಕೊಂದ ಆರೋಪಿ ಮಗನಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ದಿನೇಶ್ ಹೆಗ್ಡೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಪೆರಂಪಳ್ಳಿ ಭಂಡಾರ ಮನೆ ನಿವಾಸಿ ಪ್ರಜೋತ್ ಶೆಟ್ಟಿ (50) ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಆರೋಪಿ ಎಂದು ತಿಳಿದುಬಂದಿದೆ.

35 ಸಾಕ್ಷಿಗಳ ಪೈಕಿ 25 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದೆ. ಜೊತೆಗೆ ತಾಯಿಗೆ ಹೊಡೆದಿದ್ದಕ್ಕೆ ಮೂರು ತಿಂಗಳ ಸಾದಾ ಜೈಲುವಾಸ ಅನುಭವಿಸಿದ್ದಾರೆ.

Also Read  ಕಡಬದ ಪತ್ರಕರ್ತ ನಾಗರಾಜ್ ಎನ್.ಕೆ.ಯವರಿಗೆ ಪಿತೃ ವಿಯೋಗ

 

 

error: Content is protected !!
Scroll to Top