ಪಿಕಪ್ ನಿಂದ ಹೊರಬಂದು ಕಾರಿನೊಳಗೆ ಹೊಕ್ಕ ಅಲ್ಯುಮೀನಿಯಂ ಪಟ್ಟಿಗಳು !           ➤  ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.23. ಪಿಕ್-ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಅಲ್ಯೂಮಿನಿಯಂ ಪಟ್ಟಿಗಳು ಜಾರಿ ಕಾರಿನ ಒಳಗೆ ಹೊಕ್ಕು ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ನಂತೂರು ಜಂಕ್ಷನ್‌ನಲ್ಲಿ ಸಂಭವಿಸಿದೆ.

ಅಲ್ಯೂಮಿನಿಯಂ ಪಟ್ಟಿಗಳನ್ನು ಹೊತ್ತ ಪಿಕ್-ಅಪ್ ಹಾಗೂ ಕಾರು ಕೆಪಿಟಿಯಿಂದ ಪಂಪ್‌ವೆಲ್ ಕಡೆಗೆ ಚಲಿಸುತ್ತಿದ್ದವು. ನಂತೂರು ಜಂಕ್ಷನ್‌ ನಲ್ಲಿ ಕಾರು ಚಾಲಕ ಬ್ರೇಕ್‌ ಹಾಕಿದಾಗ ಪಿಕ್‌ ಅಪ್‌ ನಲ್ಲಿದ್ದ ಪಟ್ಟಿಗಳು ಕಾರಿನ ಹಿಂಭಾಗದಿಂದ ಒಳಗೆ ಹೊಕ್ಕಿವೆ ಎಂದು ವರದಿ ತಿಳಿಸಿದೆ.

Also Read  ಮಂಗಳೂರು: ಭೂಕುಸಿತಗೊಂಡ ಕೆತ್ತಿಕಲ್ ಗುಡ್ಡಕ್ಕೆ ಡಿಸಿ ಭೇಟಿ

 

error: Content is protected !!
Scroll to Top