(ನ್ಯೂಸ್ ಕಡಬ)newskadaba.com ಉಡುಪಿ, ಫೆ.22. ಹೈನುಗಾರಿಕೆ, ಕೃಷಿಕ ಸಮೂಹವನ್ನೇ ಬೆಚ್ಚಿ ಬೀಳಿಸಿರುವ ಚರ್ಮಗಂಟು ರೋಗಕ್ಕೆ ಜಿಲ್ಲೆಯಲ್ಲಿ ಈವರೆಗೂ 74 ಜಾನುವಾರುಗಳು ಸಾವನ್ನಪ್ಪಿವೆ. ಡಿಸೆಂಬರ್, ಜನವರಿ ತಿಂಗಳಲ್ಲಿ ರೋಗ ಪ್ರಮಾಣ ಹೆಚ್ಚಿದ್ದು, ಜಾನುವಾರುಗಳ ಜೀವ ಹಿಂಡಿತ್ತು, ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಜಾನುವಾರು ರೋಗಬಾಧೆಯಿಂದ ಬಳಲುತ್ತಿವೆ.
ಜಿಲ್ಲೆಯಲ್ಲಿ 2,57,184 ಲಕ್ಷ ಜಾನುವಾರುಗಳಿದ್ದು, ಸಂಪೂರ್ಣ ಲಸಿಕೆ ಹಾಕಿಸುವ ಪ್ರಕ್ರಿಯೆ ಜಿಲ್ಲೆ ಪಶುವೈದ್ಯರು, ಸಿಬಂದಿ ತಂಡ ಮುಗಿಸಿದೆ. ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಕಾರ್ಕಳ ಭಾಗದಲ್ಲಿ ಹೈನುಗಾರಿಕೆ ಹೆಚ್ಚಿದೆ.