ಕಡಬ: ಕಾಡಾನೆ ಸೆರೆಗೆ ಮುಂದುವರಿದ ಕಾರ್ಯಾಚರಣೆ ➤ ಒಟ್ಟು 4 ಆನೆಗಳ ಇರುವಿಕೆ ಪತ್ತೆ | ಆನೆಯ ಸೆರೆಹಿಡಿಯಲು ಸಿದ್ಧತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.22. ಕಳೆದೆರಡು ದಿನಗಳಿಂದ ಕಡಬ ಪರಿಸರದ ಜನತೆಯನ್ನು ನಿದ್ದೆಗೆಡಿಸಿದ್ದ ಕಾಡಾನೆಯೊಂದು ಇದೀಗ ಅರಣ್ಯ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.

ಕಡಬ ತಾಲೂಕಿನ ಮರ್ಧಾಳ ಸಮೀಪದ ನೈಲ ಎಂಬಲ್ಲಿ ಸೋಮವಾರ ಬೆಳಿಗ್ಗೆ ಎರಡು ಜೀವಗಳನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಸೆರೆ ಹಿಡಿಯಲು 5 ಸಾಕಾನೆಗಳೊಂದಿಗೆ ನುರಿತ ತಂಡ ಕಾಡಾನೆಯ ಬೆನ್ನು ಬಿದ್ದಿದ್ದು, ಇದೀಗ ಕೊಣಾಜೆ ಸಮೀಪದ ಸುಳ್ಯ ಆಜನ ಎಂಬಲ್ಲಿ ಕಾಡೊಂದರಲ್ಲಿ ಒಂಟಿ ಕಾಡಾನೆ ಪತ್ತೆಯಾಗಿದೆ. ಅಧಿಕಾರಿಗಳು ಆನೆಯ ಸೆರೆಗೆ ಸಿದ್ಧತೆ ನಡೆಸುತ್ತಿದ್ದಾರೆ.

Also Read  ರೂಪೇಶ್ ಶೆಟ್ಟಿ ತುಳು ಚಲನ ಚಿತ್ರ “ಜೈ” ಟೈಟಲ್ ಬಿಡುಗಡೆ

error: Content is protected !!
Scroll to Top