ಉಪ್ಪಿನಂಗಡಿ: ಆಶ್ರಮದ ಹೆಸರೇಳಿಕೊಂಡು ಬಟ್ಟೆ ಬರೆ ಸಂಗ್ರಹಿಸಿ ವಂಚನೆ !

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಫೆ.22. ಆಶ್ರಮಕ್ಕೆ ಹಣ, ಹಳೆ ಬಟ್ಟೆ ಸಂಗ್ರಹಿಸುತ್ತಿದ್ದೇವೆಂದು ನಕಲಿ ಐಡಿ ಕಾರ್ಡ್ ತೋರಿಸಿ ತಂಡವೊಂದು ಭಿಕ್ಷಾಟನೆ ನಡೆಸುತ್ತಿರುವ ಘಟನೆ ಉಪ್ಪಿನಂಗಡಿಯಲ್ಲಿ ಸಕ್ರಿಯವಾಗಿದೆ.


ಈ ತಂಡ ಮನೆಯೊಂದಕ್ಕೆ ತೆರಳಿದ ವೇಳೆ ಅವರ ವಂಚನೆ ಬಯಲಾಗಿದೆ. ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಅವರ ಮನೆಗೆ ಇಬ್ಬರು ಹೆಂಗಸರು ಸೋಮವಾರ ಬಂದಿದ್ದು, ಮೈಸೂರಿನ ಇಲವಾಲದ ಬಳಿಯ ಅಂಗವಿಕಲ ಮತ್ತು ವೃದ್ದಾಶ್ರಮಕ್ಕೆ ಬಟ್ಟೆ, ಬರೆ, ಹಣಕಾಸಿನ ನೆರವು ನೀಡುತ್ತಿದ್ದೇವೆ. ಅದಕ್ಕಾಗಿ ನಮಗೆ ನಿಮ್ಮ ಸಹಕಾರ ಅಗತ್ಯ ಎಂದಿದ್ದರು ಎನ್ನಲಾಗಿದೆ.

Also Read  ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ

error: Content is protected !!
Scroll to Top