ವಿಟ್ಲ: ಮನೆಗೆ ನುಗ್ಗಿ, ಚಿನ್ನಾಭರಣ – ನಗದು ಕಳವು !

(ನ್ಯೂಸ್ ಕಡಬ)newskadaba.com ವಿಟ್ಲ, ಫೆ.22. ಮನೆಯ ಬಾಗಿಲು ಒಡೆದು ಸುಮಾರು 1,11,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಝಬೈದಾ ಅವರ ಮನೆಗೆ ಕಳ್ಳರು ಮನೆಯ ಆರ್‌ಸಿ‍ಸಿ ಛಾವಣಿಯ ದ್ವಾರವನ್ನು ಒಡೆದು ಒಳಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಗಾಡ್ರೇಜ್‌ ಮುರಿದು ಅದರಲ್ಲಿದ್ದ 8 ಗ್ರಾಂ ತೂಕದ ಮಗುವಿನ ಕೈ ಚೈನ್, ಸುಮಾರು 8 ಗ್ರಾಂ ತೂಕದ ಮಗುವಿನ ಕಾಲು ಚೈನ್, ಸುಮಾರು 12 ಗ್ರಾಂ ತೂಕದ ಕುತ್ತಿಗೆಯ ಸರ, ಸುಮಾರು 12 ಗ್ರಾಂ ತೂಕದ ಕೈ ಬಳೆ ಹಾಗೂ ಗಾಡ್ರೇಜ್ ನಲ್ಲಿದ್ದ 15,000 ನಗದು ಕಳ್ಳತನ  ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Also Read  ಹಿಂದುಳಿದ ವರ್ಗಗಳ ವಿದ್ಯಾರ್ಥಿವೇತನ : ಅವಧಿ ವಿಸ್ತರಣೆ

 

error: Content is protected !!
Scroll to Top