ಉದನೆ ಪುತ್ಯ ಭಾಗದಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ ➤ ‘ಆಪರೇಷನ್‌ ಎಲಿಫೆಂಟ್’ ರೆಂಜಿಲಾಡಿಯಿಂದ ಉದನೆಗೆ ಶಿಫ್ಟ್

(ನ್ಯೂಸ್ ಕಡಬ) newskadaba.com ಕಡಬ, ಫೆ.21. ಇಲ್ಲಿನ ಮರ್ಧಾಳ‌ ಸಮೀಪದ ನೈಲ ಸಮೀಪ ಸೋಮವಾರದಂದು ಎರಡು ಜೀವಗಳನ್ನು ಬಲಿ ಪಡೆದ ಕಾಡಾನೆಯ ಸೆರೆ ಹಿಡಿಯುವ ಕಾರ್ಯಾಚರಣೆ ‘ಆಪರೇಷನ್ ಎಲಿಫೆಂಟ್’ನ್ನು ರೆಂಜಿಲಾಡಿಯಿಂದ ಉದನೆಗೆ ಶಿಫ್ಟ್ ಮಾಡಲಾಗಿದೆ.

ಐದು ಸಾಕಾನೆ ಹಾಗೂ ನುರಿತ ತಂಡದವರ ಉಪಸ್ಥಿತಿಯಲ್ಲಿ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ಮರ್ಧಾಳ ಸಮೀಪದ ರೆಂಜಿಲಾಡಿ, ಮೀನಾಡಿ, ನೈಲ ಪರಿಸರದಲ್ಲಿ ಆರಂಭಗೊಂಡಿದ್ದ ಕಾರ್ಯಾಚರಣೆಯನ್ನು ಮಧ್ಯಾಹ್ನದ ವೇಳೆಗೆ ಉದನೆ ಸಮೀಪದ ಪುತ್ಯ ಎಂಬಲ್ಲಿಗೆ ವರ್ಗಾಯಿಸಲಾಯಿತು. ಉದನೆಯ ಪುತ್ಯ ಸಮೀಪ ಮಂಗಳವಾರದಂದು ಕಾಡಾನೆಯು ಕಂಡು ಬಂದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಆನೆಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಾರ್ಯಾಚರಣೆಗಾಗಿ ಸೋಮವಾರ ರಾತ್ರಿ ವೇಳೆಗೆ ಮೈಸೂರು ಹಾಗೂ ದುಬಾರೆಯಿಂದ ಕಾಡಾನೆ
ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗು ಮಹೇಂದ್ರ ಎಂಬ ಸಾಕಾನೆಗಳು ಬಂದಿದೆ.

Also Read  ಕುಮಾರಧಾರ ನದಿಯಲ್ಲಿ ಮೃತದೇಹ ಪತ್ತೆ ➤ ಕಡಬ ಪೊಲೀಸರಿಂದ ಪರಿಶೀಲನೆ

 

error: Content is protected !!
Scroll to Top