ನೆಲ್ಯಾಡಿ: ರಬ್ಬರ್ ಮ್ಯಾಟ್ ಕಳ್ಳತನಕ್ಕೆ ಯತ್ನ ➤ ಆಟೋ ಚಾಲಕ ಸಹಿತ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ)newskadaba.com ನೆಲ್ಯಾಡಿ, ಫೆ.21. ಬಾರ್ ಒಂದರ ಹಿಂಭಾಗದಲ್ಲಿ ಇಟ್ಟಿದ್ದ ರಬ್ಬರ್ ಮ್ಯಾಟ್ ಕಳವುಗೈದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬೈಕ್ ಪಿಟ್ಟರ್ ಸಿದ್ದೀಕ್ ಮತ್ತು ಆಟೋರಿಕ್ಷಾ ಚಾಲಕ ಸುನಿಲ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಆರೋಪಿಗಳು ಎಂದು ತಿಳಿದುಬಂದಿದೆ.
ಕ್ಲಾಸಿಕ್ ಬಾರ್ ನ ಹಿಂಬಾಗದ ಕಂಪೌಂಡು ಒಳಗಡೆ ಇಟ್ಟಿದ್ದ ಗ್ರೀನ್ ಬಣ್ಣದ 3 ರಬ್ಬರ್ ಮ್ಯಾಟ್ ಕಳ್ಳತನ ಮಾಡಿ ಮಾರುತಿ ಓಮ್ನಿ ಕಾರಿನಲ್ಲಿ ತುಂಬಿಸಿ ಇಟ್ಟಿದ್ದರು. ಈ ವೇಳೆ ಬಾರ್ ಸಿಬ್ಬಂದಿ ಗಮನಿಸಿ ಆಪಾದಿತರನ್ನು ಹಿಡಿಯಲು ಮುಂದಾದ ವೇಳೆ ತಪ್ಪಿಸಿ ಪರಾರಿಯಾಗಿದ್ದರು.

Also Read  ಕಡಬ: ಎಕ್ಸ್.ಎಲ್.ಲೇಡಿಸ್ ಬೊಟಿಕ್ಯು ವಸ್ತ್ರ ಮಾರಾಟ ಮಳಿಗೆ ಶುಭಾರಂಭ

error: Content is protected !!
Scroll to Top