(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.21. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಂಗಳೂರಿನಿಂದ ಉಡುಪಿ ಕುಂದಾಪುರ ಬೈಂದೂರು, ಭಟ್ಕಳ, ಹೊನ್ನಾವರ ಕುಮಟಾ, ಅಂಕೋಲಾ, ಕಾರವಾರ, ಪೊಲೆಂಕಾನಕೋನ, ಮಡಗಾಂವ್, ಪೋಂಡ, ಮಂಗೇಶಿ, ಪಣಜಿ ಹಾಗೂ ಬರುವ ಮಾರ್ಗದಲ್ಲಿ ಪಣಜಿ, ಕೊರ್ಟಾಲಿಂ, ಮಡಗಾಂವ್, ಕಾನಕೋನ, ಪೊಲೆಂ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಮಣಿಪಾಲ, ಉಡುಪಿ ಮಾರ್ಗವಾಗಿ ರಾಜಹಂಸ ಹೊಸ ಸಾರಿಗೆಯನ್ನು ಇದೇ ಫೆ.22ರಿಂದ ಪ್ರಾರಂಭಿಸಲಿದೆ ಎಂದು ತಿಳಿದುಬಂದಿದೆ.
