ಕ್ರಿಕೆಟ್ ಪಂದ್ಯಾವಳಿ ವೇಳೆ ಇಬ್ಬರ ಹತ್ಯೆ ➤ PSI ಅಮಾನತು

(ನ್ಯೂಸ್ ಕಡಬ)newskadaba.com ದೊಡ್ಡಬಳ್ಳಾಪುರ, ಫೆ.21. ದೊಡ್ಡಬೆಳವಂಗಲ ಗ್ರಾಮದಲ್ಲಿ ಫೆ.17 ರಂದು ಕ್ರಿಕೆಟ್ ಪಂದ್ಯಾವಳಿ ವೇಳೆ ನಡೆದ ಇಬ್ಬರು ಯುವಕರ ಹತ್ಯೆಗೆ ಸಂಬಂಧಿಸಿದಂತೆ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕೊಲೆ ನಡೆಯುವ ಮುನ್ನ ಕ್ರಿಕೆಟ್‌ ಆಟದ ಮೈದಾನದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಆರೋಪಿಗಳು ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ದೊಡ್ಡಬೆಳವಂಗಲ ಠಾಣೆಯ ಎಸ್ ಐ ಬಸವರಾಜು ಸೂಕ್ತ ರೀತಿಯಲ್ಲಿ ಸ್ಫಂದಿಸದೆ ಕರ್ತವ್ಯ ಲೋಪವೆಸಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

Also Read  ಶಿವಮೊಗ್ಗ: ಹಣಕ್ಕಾಗಿ ಯುವತಿ ಅಪಹರಣ

error: Content is protected !!
Scroll to Top