MEIF ವತಿಯಿಂದ  SSLC  ವಿದ್ಯಾರ್ಥಿಗಳಿಗೆ  ತರಬೇತಿ  ಕಾರ್ಯಗಾರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿಫೆ.18.  ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ ,ಡುಪಿ ಜಿಲ್ಲೆ(MEIF)ವತಿಯಿಂದ   ಉಭಯ   ಜಿಲ್ಲೆಗಳಲ್ಲಿ  ಹಮ್ಮಿಕೊಂಡ  ಸರಣಿ  SSLC  ತರಬೇತಿ  ಆಂದೋಲನದ  6ನೇ  ಕಾರ್ಯಾಗಾರವು  ಉಪ್ಪಿನಂಗಡಿಯ  ಅರಫಾ  ವಿದ್ಯಾಕೇಂದ್ರದಲ್ಲಿ  ಇಂದು   ನಡೆಯಿತು.  ಅರಫಾ  ವಿದ್ಯಾ  ಕೇಂದ್ರದ  ಅಧ್ಯಕ್ಷ  ಕೆ.ಪಿ.ಎ.  ಸಿದ್ದೀಕ್  ಹಾಜಿ ಕಾರ್ಯಕ್ರಮವನ್ನು  ಉದ್ಘಾಟಿಸಿದರು. MEIF ಈಸ್ಟ್  ಝೋನ್ ಉಪಾಧ್ಯಕ್ಷ  ಕೆ. ಎಂ.  ಮುಸ್ತಫಾ  ಸುಳ್ಯ  ಅಧ್ಯಕ್ಷತೆ  ವಹಿಸಿದ್ದರು.

ವಿದ್ಯಾರ್ಥಿಗಳಲ್ಲಿ  ಆತ್ಮವಿಶ್ವಾಸ  ಮೂಡಿಸಿ,  ಪರೀಕ್ಷೆ  ಎದುರಿಸುವ  ವಿಧಾನಗಳ  ಬಗ್ಗೆ  ಸಂಪನ್ಮೂಲ  ವ್ಯಕ್ತಿಯಾಗಿ  ರಾಷ್ಟೀಯ ತರಬೇತಿದಾರ  ಪ್ರೊ. ರಾಜೇಂದ್ರ ಭಟ್  ಅವರು  ಪರಿಣಾಮಕಾರಿಯಾಗಿ  ಕಾರ್ಯಾಗಾರ ನೆರವೇರಿಸಿದರು. ಕಾರ್ಯಾಗಾರದಲ್ಲಿ  ಸುಮಾರು  200ಕ್ಕೂ  ಹೆಚ್ಚಿನ  ವಿದ್ಯಾರ್ಥಿಗಳು  ಭಾಗವಹಿಸಿದ್ದರು.

Also Read  ಕರಾವಳಿಯಲ್ಲಿ ಮಳೆಯ ಸಿಂಚನ ➤ ರಾಜ್ಯಕ್ಕೆ ಪ್ರವೇಶಿಸಿದ ಮುಂಗಾರು

error: Content is protected !!
Scroll to Top