ಅಜ್ಜಿಗೆ ಗುಂಡಿಟ್ಟ 6 ವರ್ಷದ ಬಾಲಕಿ!!

(ನ್ಯೂಸ್ ಕಡಬ) newskadaba.com ಫ್ಲೋರಿಡಾ, ಫೆ.18. ಫ್ಲೋರಿಡಾ ರಾಜ್ಯದಲ್ಲಿ 6 ವರ್ಷದ ಬಾಲಕಿಯೊಬ್ಬಳು ತನ್ನ ಸ್ವಂತ ಅಜ್ಜಿಯ ಮೇಲೆ ಗುಂಡು ಹಾರಿಸಿದ ಘಟನೆ ಬೆಳಕಿಗೆ ಬಂದಿದೆ. ಅಮೆರಿಕದಲ್ಲಿ ಮುಕ್ತವಾಗಿ ಗನ್ ಲೈಸೆನ್ಸ್ ನೀಡುವ ಬಗ್ಗೆ ಸಾಕಷ್ಟು ಚರ್ಚೆ, ವಾದ ಪ್ರತಿವಾದಗಳು ನಡೆಯುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿದೆ.

ಅದೃಷ್ಟವಶಾತ್, ಮೊಮ್ಮಗಳಿಂದ ಗುಂಡು ಬಡಿದ ಮಹಿಳೆಗೆ ಪ್ರಾಣಾಪಾಯವಾಗಿಲ್ಲ. 57 ವರ್ಷದ ಈಕೆಗೆ ಬೆನ್ನಿನ ಕೆಳಭಾಗದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. 6 ವರ್ಷದ ಬಾಲಕಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈಕೆ ಆಕಸ್ಮಿಕವಾಗಿ ಗುಂಡು ಹಾರಿಸಿದ್ದು ಎಂಬ ವಿಚಾರ ಸದ್ಯಕ್ಕೆ ಗೊತ್ತಾಗಿದೆ.

Also Read  ಕಡಬದ ಸಸ್ಯಾಹಾರಿ ಮತ್ತು ಮಾಂಸಹಾರಿ ಹೊಟೇಲ್ ಬಿರಿಯಾನಿ ಹೌಸ್ ಪುನರಾರಂಭ ➤ಲಾಕ್ಡೌನ್ ಹಿನ್ನೆಲೆ ಲಾಕ್ ಆಗಿದ್ದ ಹೊಟೇಲ್

 

error: Content is protected !!
Scroll to Top