ರೋಹಿತ್ ಶರ್ಮಾ ಅತ್ಯಂತ ಶ್ರೇಷ್ಠ ನಾಯಕ… ➤ ವೀರೇಂದ್ರ ಸೆಹ್ವಾಗ್!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.18.   ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಶ್ರೇಷ್ಠ ನಾಯಕ ಯಾರು ಎಂಬ ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ ಡೆಲ್ಲಿ ಡೇರ್ ಡೆವಿಲ್ಸ್ ಮಾಜಿ ನಾಯಕ ವೀರೇಂದ್ರ ಸೆಹ್ವಾಗ್ ಕೂಡ ಈ ವಿಷಯ ಪ್ರಸ್ತಾಪಿಸಿದ್ದಾರೆ. 4 ಬಾರಿ ಐಪಿಎಲ್ ಚಾಂಪಿಯನ್ಸ್‌ ನಾಯಕ ಮಹೇಂದ್ರ ಸಿಂಗ್ ಧೋನಿಗಿಂತ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಅತ್ಯಂತ ಶ್ರೇಷ್ಠ ನಾಯಕ ಎಂದು ಗುಣಗಾನ ಮಾಡಿದ್ದಾರೆ.

“ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗುವುದಕ್ಕೂ ಮುನ್ನ ಅವರಿಗೆ ಭಾರತ ತಂಡದ ನಾಯಕತ್ವವನ್ನು ನಿಭಾಯಿಸಿದ್ದ ಅನುಭವವಿತ್ತು. ಅಲ್ಲದೆ ಅವರು ಟಿ20 ವಿಶ್ವಕಪ್ ಟೂರ್ನಿಯ ಚಾಂಪಿಯನ್ ನಾಯಕರಾಗಿದ್ದರು. ಆದರೆ ರೋಹಿತ್ ಶರ್ಮಾ ಅವರ ನಾಯಕತ್ವದ ಪಯಣ ಶುರುವಾಗಿದ್ದೆ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ. ಆದರೂ ಅವರು ನಾಯಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ತಂಡವನ್ನು 5 ಬಾರಿ ಚಾಂಪಿಯನ್ಸ್‌ ಮಾಡಿದ್ದಾರೆ,” ಎಂದು ಸೆಹ್ವಾಗ್ ಶ್ಲಾಘಿಸಿದರು ಎಂದು ವರದಿಯಾಗಿದೆ.

Also Read  ಅಂಗಡಿ ಮಾಲಕರೇ ಗಮನಿಸಿ- ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಕಡ್ಡಾಯ

error: Content is protected !!
Scroll to Top