(ನ್ಯೂಸ್ ಕಡಬ)newskadaba.com ಬಲ್ಗೇರಿಯಾ, ಫೆ.18. ರಾಜಧಾನಿ ಸೋಫಿಯಾದ ಹೊರವಲಯದಲ್ಲಿ ಶವಗಳಿದ್ದ ಟ್ರಕ್ ಅನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಆರಂಭಿಕ ಮಾಹಿತಿಯ ಪ್ರಕಾರ, ಟ್ರಕ್‌ನಲ್ಲಿ ಸುಮಾರು 40 ವಲಸಿಗರು ಪ್ರಯಾಣಿಸುತ್ತಿದ್ದರು. ಟ್ರಕ್ ನಲ್ಲಿದ್ದ 40 ಜನರಲ್ಲಿ 18 ಜನರು ಆಹಾರ/ ಆಮ್ಲಜನಕವಿಲ್ಲದೆ ಪ್ರಾಣ ಕಳೆದುಕೊಂಡಿದ್ದಾರೆ. ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬದುಕುಳಿದವರ ಸ್ಥಿತಿಯೂ ಗಂಭೀರವಾಗಿದ್ದು, ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.