ಕಾರು-ಲಾರಿ ಮುಖಾಮುಖಿ ಢಿಕ್ಕಿ ➤ಸ್ಥಳದಲ್ಲೇ ಇಬ್ಬರ ಮೃತ್ಯು

(ನ್ಯೂಸ್ ಕಡಬ) newskadaba.com ಸೈದಾಪುರ, ಫೆ.18 :ಪಟ್ಟಣದ ಹೊರವಲಯದ ಕರಿಬೆಟ್ಟ ಕ್ರಾಸ್ ಹತ್ತಿರದ ಬೀದರ-ಗುತ್ತಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಲಾರಿ ಮತ್ತು ಕಾರಿನ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.

ನೆರೆಯ ಆಂಧ್ರಪ್ರದೇಶದ ಆಧೋನಿಯಿಂದ ಕಲಬುರಗಿ ಕಡೆ ಬರುತ್ತಿದ್ದ ಕಾರು, ಯಾದಗಿರಿ ಕಡೆಯಿಂದ ರಾಯಚುರು ಮಾರ್ಗವಾಗಿ ಹೊಗುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ನಡೆದಿದೆ. ಇದರಲ್ಲಿ ಆಧೋನಿ ಮೂಲದ ಜ್ಞಾನೇಶ್ವರ ಸಿಂಗಾಡೆ(36) ಕಾರು ಚಾಲಕ ಸೈಫುಲ್ಲಾ ಲಾಲಮಟ್ಟಿ(27)ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

Also Read  ವಿಧಾನಪರಿಷತ್ ಉಪಚುನಾವಣೆ- ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಅ. 21ರಂದು ಮತದಾನ

error: Content is protected !!
Scroll to Top