(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.18, ನಮ್ಮ ಬಳಿ ಇನ್ನೂ ಸಮಯವಿದೆ, ಬಜೆಟ್ ನಲ್ಲಿ ಘೋಷಣೆಗಳನ್ನು ಈಡೇರಿಸುತ್ತೇವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಬಜೆಟ್ ಮಂಡನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 16ರಷ್ಟು (43,462 ಕೋಟಿ ರೂ.) ವೆಚ್ಚ ಹೆಚ್ಚಿದ್ದರೂ ನಮ್ಮ ಸರ್ಕಾರ ಬಜೆಟ್ ಘೋಷಣೆಗಳನ್ನು ಜಾರಿಗೆ ತರಲಿದೆ ಎಂದು ಪ್ರತಿಪಕ್ಷಗಳ ಸಂಶಯಗಳ ನಡುವೆ ವಿಶ್ವಾಸ ವ್ಯಕ್ತಪಡಿಸಿದರು.