ನಾಪತ್ತೆಯಾಗಿದ್ದ ಪರ್ವತಾರೋಹಿ ಮೃತದೇಹ ಬರೋಬ್ಬರಿ 50 ವರ್ಷಗಳ ಬಳಿಕ ಪತ್ತೆ..!       

(ನ್ಯೂಸ್ ಕಡಬ)newskadaba.com ಸ್ವಿಜರ್ಲ್ಯಾಂಡ್, ಫೆ.18. ಪರ್ವತ ಏರಲು ತೆರಳಿ ನಾಪತ್ತೆಯಾಗಿದ್ದ ಬ್ರಿಟಿಷ್ ಪರ್ವತಾರೋಹಿ ಒಬ್ಬರ ಮೃತದೇಹ ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಪತ್ತೆಯಾಗಿದೆ. ಈತ 1974ರ ಡಿಸೆಂಬರ್ 31 ರಂದು ನಾಪತ್ತೆಯಾಗಿದ್ದ ಎಂದು ಮೂಲಗಳು ಹೇಳಿವೆ. ಪರ್ವತಾರೋಹಣ ವೇಳೆ 32 ವರ್ಷ ವಯಸ್ಸಿನವರಾಗಿದ್ದ ಈ ವ್ಯಕ್ತಿ ಬಳಿಕ ನಾಪತ್ತೆಯಾಗಿದ್ದರು.

ಈತನ ಮೃತ ದೇಹ 2022ರ ಸೆಪ್ಟೆಂಬರ್ 5 ರಂದು ಪತ್ತೆಯಾಗಿದೆ ಎನ್ನಲಾಗಿದೆ. ಪರ್ವತಾರೋಹಿಯ ವಯಸ್ಸು (ಆಗಿನ ಸಂದರ್ಭದಲ್ಲಿ) ಹಾಗೂ ರಾಷ್ಟ್ರೀಯತೆಯನ್ನು ಮಾತ್ರ ಪೊಲೀಸರು ಬಹಿರಂಗಪಡಿಸಿದ್ದಾರೆ. 1925 ರಿಂದ ಈಚೆಗೆ ಈ ಪರ್ವತದಲ್ಲಿ 300ಕ್ಕೂ ಅಧಿಕ ಮಂದಿ ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಇದೀಗ ಹಿಮಗಲ್ಲು ಕರಗುತ್ತಿರುವ ಕಾರಣ ಮೃತದೇಹಗಳು ಕಾಣಿಸುತ್ತಿವೆ.

Also Read  ಅಪ್ರಾಪ್ತ ಬಾಲಕಿಯ ವಿವಾಹ ನಿಲ್ಲಿಸಿದ ಕ್ಲಾಸ್ ಮೇಟ್ !

 

error: Content is protected !!
Scroll to Top