ನಾಪತ್ತೆಯಾಗಿದ್ದ ಪರ್ವತಾರೋಹಿ ➤ 50 ವರ್ಷಗಳ ಬಳಿಕ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com. ಸ್ವಿಜರ್ಲ್ಯಾಂಡ್ , ಫೆ.18. ಆಲ್ಸ್ಪ್ ಪರ್ವತ ಏರಲು ತೆರಳಿ ನಾಪತ್ತೆಯಾಗಿದ್ದ ಬ್ರಿಟಿಷ್ ಪರ್ವತಾರೋಹಿ ಒಬ್ಬರ ಮೃತದೇಹ ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಪತ್ತೆಯಾಗಿದೆ. ಈತ 1974ರ ಡಿಸೆಂಬರ್ 31 ರಂದು ನಾಪತ್ತೆಯಾಗಿದ್ದ ಎಂದು ಮೂಲಗಳು ಹೇಳಿವೆ. ಪರ್ವತಾರೋಹಣ ವೇಳೆ 32 ವರ್ಷ ವಯಸ್ಸಿನವರಾಗಿದ್ದ ಈ ವ್ಯಕ್ತಿ ಬಳಿಕ ನಾಪತ್ತೆಯಾಗಿದ್ದರು.

ಈತನ ಮೃತ ದೇಹ 2022ರ ಸೆಪ್ಟೆಂಬರ್ 5 ರಂದು ಪತ್ತೆಯಾಗಿದೆ ಎನ್ನಲಾಗಿದೆ. ಪರ್ವತಾರೋಹಿಯ ವಯಸ್ಸು (ಆಗಿನ ಸಂದರ್ಭದಲ್ಲಿ) ಹಾಗೂ ರಾಷ್ಟ್ರೀಯತೆಯನ್ನು ಮಾತ್ರ ಪೊಲೀಸರು ಬಹಿರಂಗಪಡಿಸಿದ್ದಾರೆ.

1925 ರಿಂದ ಈಚೆಗೆ ಈ ಪರ್ವತದಲ್ಲಿ 300ಕ್ಕೂ ಅಧಿಕ ಮಂದಿ ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಇದೀಗ ಹಿಮಗಲ್ಲು ಕರಗುತ್ತಿರುವ ಕಾರಣ ಮೃತದೇಹಗಳು ಕಾಣಿಸುತ್ತಿವೆ.

error: Content is protected !!
Scroll to Top