ನಾಟಿವೈದ್ಯ ಮಿತ್ತೋಡಿ ಬಾಬು ಪೂಜಾರಿ ವಿಧಿವಶ

(ನ್ಯೂಸ್ ಕಡಬ) newskadaba.com ಕಡಬ, ಡಿ.28. ಇಲ್ಲಿನ ಮರ್ಧಾಳ ನಿವಾಸಿ ಖ್ಯಾತ ನಾಟಿ ವೈದ್ಯ ಮಿತ್ತೋಡಿ ಬಾಬು ಪೂಜಾರಿ (ಕೊರಗಪ್ಪ ಪೂಜಾರಿ) ಅಲ್ಪಕಾಲದ ಅಸೌಖ್ಯದಿಂದ ಗುರುವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು10 ದಿನಗಳ ಹಿಂದೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾದರು. ಹಳ್ಳಿ ಮದ್ದು ನೀಡುತ್ತಿದ್ದ ಅವರಿಗೆ 85 ವರ್ಷ ವಯಸ್ಸಾಗಿತ್ತು.

error: Content is protected !!

Join the Group

Join WhatsApp Group