➤ರಾಜ್ಯದ ತಲಾ ಆದಾಯ ಹೆಚ್ಚಳ ➤ ಮೊದಲ ಸ್ಥಾನದಲ್ಲಿ ಬೆಂಗಳೂರು, ದ.ಕನ್ನಡ ದ್ವಿತೀಯ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.18.  ರಾಜ್ಯದ ತಲಾ ಆದಾಯ ಕಳೆದ ಒಂದು ವರ್ಷದಲ್ಲಿ 36 ಸಾವಿರ ರೂ. ಹೆಚ್ಚಳವಾಗಿದೆ ಎಂದು 2022- 23ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ರಾಜ್ಯ ನಿವ್ವಳ ಆಂತರಿಕ ಉತ್ಪನ್ನ ಹಾಗೂ ತಲಾ ಆದಾಯ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. 2021- 22ರಲ್ಲಿ 2,65,623 ರೂ. ಇದ್ದ ರಾಜ್ಯದ ಜನರ ತಲಾ ಆದಾಯ, 2022- 23ನೇ ಸಾಲಿನಲ್ಲಿ 3,01,673 ರೂ.ಗೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜ್ಯದ ವಾರ್ಷಿಕ ತಲಾ ಆದಾಯದಂತೆ ಜಿಲ್ಲಾವಾರು ತಲಾ ಆದಾಯವೂ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಎಂದಿನಂತೆ ಬೆಂಗಳೂರು ನಗರ 6,21,131 ರೂ. ತಲಾ ಆದಾಯದೊಂದಿಗೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ 1,24,998 ರೂ. ತಲಾ ಆದಾಯದೊಂದಿಗೆ ಜಿಲ್ಲೆಗಳಲ್ಲೇ ಕೊನೆಯ ಸ್ಥಾನದಲ್ಲಿದೆ.

Also Read  ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಬಸವಣ್ಣನ ಪ್ರತಿಮೆ ನಿರ್ಮಾಣ ➤ ಸಿಎಂ ಬೊಮ್ಮಾಯಿ ಘೋಷಣೆ…!

ಈ ವರ್ಷವೂ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳೇ ತಲಾ ಆದಾಯದಲ್ಲಿ ಹಿಂದಿವೆ. 3,70,834 ರೂ.ಗಳೊಂದಿಗೆ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದ್ದರೆ, 3,38,978 ರೂ. ತಲಾ ಆದಾಯದೊಂದಿಗೆ ಕರಾವಳಿ ಇನ್ನೊಂದದು ಜಿಲ್ಲೆ ಉಡುಪಿ ಮೂರನೇ ಸ್ಥಾನದಲ್ಲಿದೆ. ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ. ಕೊನೆಯ ಐದನೇ ಸ್ಥಾನದಲ್ಲಿ ಕ್ರಮವಾಗಿ ಯಾದಗಿರಿ, ಕೊಪ್ಪಳ, ಬೆಳಗಾವಿ, ಬೀದರ್‌, ಕಲಬುರಗಿ ಜಿಲ್ಲೆಗಳಿವೆ.

 

error: Content is protected !!
Scroll to Top