SSLC ಪೂರ್ವ ಸಿದ್ಧತಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.18. ಎಸ್ಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದ್ದು, ಫೆ.27ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಉರ್ದು, ಮರಾಠಿ ಮತ್ತು ಸಂಸ್ಕೃತ ಭಾಷಾ ಪರೀಕ್ಷೆ ಫೆ.28ರಂದು ದ್ವಿತೀಯ ಭಾಷೆ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪರೀಕ್ಷೆಗಳು ನಡೆಯಲಿವೆ.

ಮಾ.1ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಸಂಸ್ಕೃತ, ಅರೇಬಿಕ್, ಪರ್ಷಿಯನ್, ಉರ್ದು, ಕೊಂಕಣಿ, ಮತ್ತು ತುಳು ಭಾಷಾ ಪರೀಕ್ಷೆಗಳು ನಡೆಯಲಿದೆ. ಮಾ.2ರಂದು ಗಣಿತ, ಮಾ.3ರಂದು ವಿಜ್ಞಾನ ಹಾಗೂ ಮಾ.4ರಂದು ಸಮಾಜ ವಿಜ್ಞಾನ ನಡೆಯಲಿದೆ.

Also Read  ಮಂಗಳೂರಿನಲ್ಲಿ ಮತ್ತೊಂದು ದೋಣಿ ದುರಂತ ➤ 6 ಮಂದಿ ಮೀನುಗಾರರು ನಾಪತ್ತೆ!

ಪೂರ್ವಸಿದ್ಧತಾ ಪರೀಕ್ಷೆ ನಡೆಸಲು ಪ್ರತಿ ವಿದ್ಯಾರ್ಥಿಗೆ 50 ರೂಗಳನ್ನು ನಿಗದಿಪಡಿಸಲಾಗಿದೆ. ಶುಲ್ಕವನ್ನು ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಂದ ಪಡೆದು ಆಯಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ವರ್ಗಾಯಿಸಬೇಕು ಎಂದು ಸೂಚಿಸಿದೆ.

 

 

error: Content is protected !!
Scroll to Top