ಚೀನ ಉದ್ಯಮಿ ಬಾವೋ ಫಾನ್‌ ನಾಪತ್ತೆ

(ನ್ಯೂಸ್ ಕಡಬ)newskadaba.com ಬೀಜಿಂಗ್‌, ಫೆ. 18.  ಚೀನದ ಪ್ರಮುಖ ಉದ್ಯಮಿ ಮತ್ತು ಚೀನ ರೆನೇಸಾನ್ಸ್‌ ಹೋಲ್ಡಿಂಗ್ಸ್‌ ನ ಸಿಇಒ ಬಾವೋ ಫಾನ್‌ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಅವರು ಎಷ್ಟು ದಿನಗಳಿಂದ ಸಂಪರ್ಕಕ್ಕೆ ಲಭ್ಯರಾಗಿಲ್ಲ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಆದರೆ, ಅವರ ಕಚೇರಿಯ ಅಧಿಕಾರಿಗಳ ಪ್ರಕಾರ 2 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದರಿಂದಾಗಿ ಅವರ ಕಂಪನಿಯ ಷೇರುಗಳು ಕುಸಿದಿವೆ.

ದೊಡ್ಡ ಉದ್ದಿಮೆಗಳು, ಟೆಕ್‌ ಕಂಪನಿಗಳ ವಿರುದ್ಧ ಚೀನಾ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದ ಬಳಿಕ ಚೀನದ ಅಗ್ರಗಣ್ಯ ಶ್ರೀಮಂತರು ನಾಪತ್ತೆಯಾಗುತ್ತಿದ್ದಾರೆ. ಫೋಬ್ಸ್ ನಿಯತಕಾಲಿಕದ ಪ್ರಕಾರ ಕಮ್ಯೂನಿಸ್ಟ್‌ ಪಾರ್ಟಿ ಆಫ್ ಚೀನ ಅಧಿಕಾರ ವಹಿಸಿಕೊಂಡ ಬಳಿಕ ಹಲವು ಮಂದಿ ಶ್ರೀಮಂತರು ನಾಪತ್ತೆಯಾಗಿದ್ದಾರೆ.

Also Read  ಗಡಿಭಾಗಗಳಲ್ಲಿ ಪೊಲೀಸರಿಂದ ಕಟ್ಟೆಚ್ಚರ ➤ ನಕಲಿ ಮತದಾನಕ್ಕೆ ಅವಕಾಶವಿಲ್ಲ

 

 

error: Content is protected !!
Scroll to Top