(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಫೆ.18. ಶಾಲೆಯೊಂದರಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್ ತುಂಡುಗಳನ್ನು ವಿದ್ಯಾರ್ಥಿಗಳಿಗೆ ಹಾಕಿಲ್ಲ. ಕೋಳಿಯ ಎಲ್ಲಾ ಉತ್ತಮ ಭಾಗಗಳನ್ನು ತಮಗಾಗಿ ಶಿಕ್ಷಕರು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿರುವ ಘಟನೆ ಮಾಲ್ಡಾ ಜಿಲ್ಲೆಯ ಇಂಗ್ಲಿಷ್ ಬಜಾರ್ ಪ್ರದೇಶದ ಅಮೃತಿ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ. ಶಿಕ್ಷಕರ ವಿರುದ್ಧ ಕೋಪಗೊಂಡ ಪೋಷಕರು ಅವರನ್ನು ಕೊಠಡಿಯಲ್ಲಿ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪೋಷಕರ ಆರೋಪದ ಮೇರೆಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಶಿಕ್ಷಕರು ಕೋಳಿ ಮಾಂಸದಿಂದ ಎಲ್ಲಾ ಕಾಲಿನ ತುಂಡುಗಳು ಮತ್ತು ಇತರ ಮಾಂಸದ ಭಾಗಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಕುತ್ತಿಗೆ, ಯಕೃತ್ತು ಮತ್ತು ಹೊಟ್ಟೆ ಭಾಗವನ್ನು ನೀಡಿದ್ದಾರೆ ಎಂದು ಪೋಷಕರು ಸಂಸ್ಥೆಯ ಆವರಣಕ್ಕೆ ನುಗ್ಗಿದ್ದಾರೆ ಎಂದು ವರದಿಯಾಗಿದೆ.