ಆರ್​ಸಿಬಿ ಮಹಿಳಾ ತಂಡಕ್ಕೆ ನಾಯಕಿಯಾಗಿ ಸ್ಮೃತಿ ಮಂಧಾನ ಆಯ್ಕೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.18. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಆರ್ ಸಿಬಿ ಪುರುಷರ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ ಆರ್​ಸಿಬಿ ಮಹಿಳಾ ತಂಡದ ನಾಯಕಿ ಯಾರು ಎಂಬುದನ್ನು ರಿವಿಲ್ ಮಾಡಿದರು.

ಕೆಲವು ದಿನಗಳ ಹಿಂದೆ ನಡೆದ ಮೊದಲ ಮಹಿಳಾ ಪ್ರೀಮಿಯರ್ ಲೀಗ್‌ ಆಟಗಾರ್ತಿಯರ ಹರಾಜಿನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಅವರನ್ನು ಆರ್​ಸಿಬಿ ಬರೋಬ್ಬರಿ 3.40 ಕೋಟಿಗೆ ಖರೀದಿಸಿತ್ತು. ವಾಸ್ತವವಾಗಿ ಹರಾಜಿನಲ್ಲಿ ಸ್ಮೃತಿ ಮಂಧಾನ ಖರೀದಿಗಾಗಿ ಮುಂಬೈ ಮತ್ತು ಆರ್‌ಸಿಬಿ ನಡುವೆ ತೀವ್ರ ಫೈಪೋಟಿ ನಡೆಯಿತು. ಅಂತಿಮವಾಗಿ ಮಂಧಾನ ಅವರನ್ನು 3.40 ಕೋಟಿ ರೂ.ಗೆ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿತ್ತು ಎಂದು ವರದಿಯಾಗಿದೆ.

Also Read  5ನೇ, 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ..! ➤ ಪರೀಕ್ಷಾ ಕೇಂದ್ರಗಳನ್ನು ಮ್ಯಾಪಿಂಗ್ ಮಾಡಲು ಸೂಚನೆ

 

error: Content is protected !!
Scroll to Top