ನೀರಿನ ಸೋರಿಕೆ ತಡೆಗಟ್ಟಲು ಶೀಘ್ರದಲ್ಲೇ ಜಾಗೃತದಳ ರಚನೆ     ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.17. ನಗರದಲ್ಲಿ ನೀರಿನ ಕಳ್ಳತನ, ಅಕ್ರಮ ಸಂಪರ್ಕ ಮತ್ತು ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಶೀಘ್ರದಲ್ಲೇ ಜಾಗೃತ ದಳ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ನೀರು ನಿರ್ವಹಣೆಯಲ್ಲಿ ಸುಧಾರಣೆ ತರುವ ಅಗತ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅನಧಿಕೃತ ನೀರಿನ ಸಂಪರ್ಕ ಮತ್ತು ಕಳ್ಳತನವನ್ನು ಪರಿಶೀಲಿಸಲು ಜಾಗೃತ ದಳವನ್ನು ರಚಿಸಲಾಗುವುದು ಮತ್ತು ಸೋರಿಕೆಯನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

Also Read  ಕಡಬ ಘಟಕದ ಪ್ರಭಾರ ಘಟಕಾಧಿಕಾರಿ ತೀರ್ಥೇಶ್ ಅಮೈ ಅವರಿಗೆ ಪದೋನ್ನತಿ

 

error: Content is protected !!