ವಿದ್ಯಾರ್ಥಿಗಳ ಪ್ರತಿಭಟನೆಗೆ ಬ್ರೇಕ್ ➤ಕೃಷಿ ವಿವಿ ಹೊಸ ಪ್ಲಾನ್..!

(ನ್ಯೂಸ್ ಕಡಬ) newskadaba.com ರಾಯಚೂರು, ಫೆ.17.  ವಿದ್ಯಾರ್ಥಿಗಳ ಪ್ರತಿಭಟನೆಗೆ ಬ್ರೇಕ್ ಹಾಕಲು ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಹೊಸ ಪ್ಲಾನ್‌ವೊಂದನ್ನ ಮಾಡಿದೆ. ಹೌದು, ಪ್ರತಿಭಟನೆ ಕುಳಿತ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಬಿ.ಟೆಕ್ ತಾಂತ್ರಿಕ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಭೋಜನ ವ್ಯವಸ್ಥೆಯನ್ನ ಸ್ಥಗಿತ ಮಾಡಲಾಗಿದೆ. ಕೃಷಿ ವಿವಿಯ ಆವರಣದಲ್ಲಿನ ವಸತಿ ನಿಲಯದಲ್ಲಿ ಪ್ರವೇಶ ನಿಷೇಧಿಸಿ ರಾಯಚೂರು ಕೃಷಿ ವಿವಿಯ ಕುಲ ಸಚಿವರು  ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

ಕಳೆದ 30 ದಿನಗಳಿಂದ ರಾಯಚೂರು ಕೃಷಿ ವಿವಿಯ ಬಿ.ಟೆಕ್ ವಿಭಾಗದ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಸರ್ಕಾರದ AO ಮತ್ತು AAO ಹುದ್ದೆಯಲ್ಲಿ ಶೇ. 15ರಷ್ಟು ಮೀಸಲಾತಿ ನೀಡಬೇಕು. ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ‌ನಡೆಸುತ್ತಿದ್ದಾರೆ.

error: Content is protected !!

Join the Group

Join WhatsApp Group