ಗುಡ್ಡಕ್ಕೆ ಬೆಂಕಿ ಹಾಕಿದ ದುಷ್ಕರ್ಮಿಗಳು!

(ನ್ಯೂಸ್ ಕಡಬ) newskadaba.com ದಾವಣಗೆರೆ, ಫೆ.17. ಇತಿಹಾಸ ಪ್ರಸಿದ್ಧ ಸೂಳೆಕೆರೆ ಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಪಾರ ಪ್ರಮಾಣದ ಸಸ್ಯ ಸಂಪತ್ತು ಸುಟ್ಟು ನಾಶವಾಗಿದೆ. ಕಾಡು ಪ್ರಾಣಿಗಳು, ಪಕ್ಷಿ ಸಂಕುಲ ಅರಣ್ಯದಿಂದ ಚಿತ್ಕಾರದೊಂದಿಗೆ ಪಾಲಾಯನ ಮಾಡಿವೆ. ಗುಡ್ಡಕ್ಕೆ ಹೊಂದಿಕೊಂಡ ಜಮೀನು ಕಬಳಿಸಲು ಭೂಗಳ್ಳ ಕಿಡಿಗೇಡಿಗಳು ಈ ಕೃತ್ಯ ಎಸಗುತ್ತಿದ್ದಾರೆ.

ಇದರ ಜತೆ ದನಗಾಹಿಗಳು ಹುಲ್ಲು ಬೆಳೆಯಲಿ ಎಂದೂ ಕೂಡ ಇಂತಹ ಕೆಲಸ ಮಾಡುತ್ತಿದ್ದಾರೆ. ಏನೇ ಆದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬುದು ಪರಿಸರ ಪ್ರೇಮಿ ಮತ್ತು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.

Also Read  ಕಡಬ: ಮಿತಿಮೀರಿದ ಕಾಡಾನೆಗಳ ಉಪಟಳ ➤ 'ಆಪರೇಷನ್ ಎಲಿಫೆಂಟ್' ಪುನರಾರಂಭಿಸುವಂತೆ ನೀತಿ ತಂಡ ಆಗ್ರಹ

error: Content is protected !!
Scroll to Top