ನ್ಯಾಯಕೊಡಿ ಎಂದು ಹಲ್ಲೆಗೊಳಗಾದ ಪತಿಯನ್ನು ಎಸ್ಪಿ ಕಚೇರಿಗೆ ಹೆಗಲ ಮೇಲೆ ಹೊತ್ತುಕೊಂಡು ಬಂದ ಪತ್ನಿ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಫೆ.17.  ಹಲ್ಲೆಗೊಳಗಾದ ವ್ಯಕ್ತಿಯೋರ್ವನಿಗೆ ನ್ಯಾಯ ಕೋರಿ ಆತನ ಪತ್ನಿ ಆತನನ್ನು ಹೆಗಲ ಮೇಲೆ ಹೊತ್ತು ಎಸ್ ಪಿ ಕಚೇರಿಗೆ ಕರೆದುಕೊಂಡು ಬಂದ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.

 

ಶಾದೂಲ್ ಜಿಲ್ಲೆಯಲ್ಲಿ ಸೋಹಾಗ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿ ಗ್ರಾಮದ ಗೆಂಡಲಾಲ್ ಯಾದವ್ ಎಂಬ ಕೂಲಿ ಕಾರ್ಮಿಕ ಕೆಲಸ ಮುಗಿಸಿಕೊಂಡು ಬರುವಾಗ ಮೂವರು ದುಷ್ಕರ್ಮಿಗಳು ಆತನಿಗೆ ಹಲ್ಲೆ ನಡೆಸಿ ದರೋಡೆ ಮಾಡಿದ್ದರು. ಇದರಿಂದ ಗೆಂಡಲಾಲ್ ಪತ್ನಿ ತನ್ನ ಗಾಯಾಳು ಪತಿಯನ್ನು ಹೆಗಲ ಮೇಲೆ ಹೊತ್ತು ಎಸ್ ಪಿ ಕಚೇರಿಗೆ ಕರೆ ತಂದಿದ್ದಾರೆ. ಈ ಕುರಿತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುಕೇಶ್ ವೈಶ್ಯ, ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Also Read  ಬೋಟ್ ದುರಂತದಲ್ಲಿ ನಾಪತ್ತೆಯಾದ ಮೃತದೇಹ ಪತ್ತೆ..!

 

 

 

error: Content is protected !!
Scroll to Top