11 ಲಕ್ಷ ರೂ. ಗಾಂಜಾ ಜಪ್ತಿ ➤ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಭಾಲ್ಕಿ, ಫೆ.16.  ಭಾಲ್ಕಿ ಉಪವಿಭಾಗದ ಭಾಲ್ಕಿ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾರಣೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ.11,2000/- ಗಾಂಜಾ ಜಪ್ತಿ ಮಾಡಿ, ಗಾಂಜಾ ಸಾಗಾಟ ಪ್ರಕರಣದಲ್ಲಿ ಆರೋಪಿತರನ್ನು ಬಂಧಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ ಲಂಗೋಟಿ ಮೆಚ್ಚುಗೆ ವ್ಯಕ್ತ ಪಡಿಸಿದರು ಎಂದು ವರದಿಯಾಗಿದೆ.

ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿದ ಎಸ್.ಪಿ ಚನ್ನಬಸವಣ್ಣ ಲಂಗೋಟಿಯವರು ಪತ್ರಕರ್ತರೊಂದಿಗೆ ಮಾತನಾಡಿ, ಭಾಲ್ಕಿ ಗ್ರಾಮೀಣ ಠಾಣೆಯ ವ್ಯಾಪ್ತಿಯ ಅಂಬೇಸಾಂಗವಿ ಕ್ರಾಸ್ ಹತ್ತಿರ ರಾಷ್ಟೀಯ ಹೆದ್ದಾರಿ 50 ರಲ್ಲಿ ವಿಶಾಖಪಟ್ಟಣ ದಿಂದ ಸೋಲಾಪುರದ ಕಡೆಗೆ ಹೋಗುತ್ತಿದ್ದ ಕೆಂಪು ಬಣ್ಣದ ಕಾರಿನಲ್ಲಿಯ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 57.6 ಕಿ.ಗ್ರಾಂ ಗಾಂಜಾ ಅಂದಾಜು ಬೆಲೆ 7 ಲಕ್ಷ 20 ಸಾವಿರ ಸೇರಿದಂತೆ ಅಂದಾಜು 4 ಲಕ್ಷ ರೂ. ಕಾರು ಒಟ್ಟು 11 ಲಕ್ಷ 20 ಸಾವಿರ ರೂ. ವಸ್ತುಗಳನ್ನು ಜಪ್ತಿಮಾಡಿ ಕಲಂ 20(ಬಿ)(2)(ಸಿ) ಎನ್.ಡಿ.ಪಿ.ಎಸ್ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ ತಿಳಿಸಿದರು.

Also Read  ಬೆಳ್ತಂಗಡಿ: ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

 

 

error: Content is protected !!
Scroll to Top