ಟ್ರಕ್ ಮತ್ತು ಜೀಪ್ ನಡುವೆ ರಸ್ತೆ ಅಪಘಾತ ➤ಏಳು ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಪಟಾನ್, ಫೆ.16. ಗುಜರಾತ್‌ನ ಪಟಾನ್ ಜಿಲ್ಲೆಯ ವರಾಹಿ ಬಳಿ ನಿಂತಿದ್ದ ಟ್ರಕ್‌ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಅಪಘಾತ ಸಂಭವಿಸಿದೆ, ರಾತ್ರಿಯಿಡಿ ತನಿಖೆ ನಡೆಸಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೀಪ್ ಸುಮಾರು 18 ಜನರನ್ನು ಹೊತ್ತೊಯ್ದಿತ್ತು, ಅದರಲ್ಲಿ 11 ಮಂದಿ ಗಾಯಗೊಂಡಿದ್ದರು, ಐವರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಇಬ್ಬರು ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ ಎಂದು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿದೆ.

Also Read  ವಾಷಿಂಗ್ ಮೆಷಿನ್ ನಲ್ಲಿ 3 ವರ್ಷದ ಬಾಲಕನ ಮೃತದೇಹ ಪತ್ತೆ ಮಹಿಳೆ ಅರೆಸ್ಟ್                          

 

 

error: Content is protected !!
Scroll to Top