(ನ್ಯೂಸ್ ಕಡಬ)newskadaba.com ಕೊಪ್ಪಳ, ಫೆ.16. ಹತ್ತನೇ ತರಗತಿ ಓದುತ್ತಿದ್ದ ಹದಿನಾರು ವರ್ಷದ ಬಾಲಕಿಗೆ ಹೆರಿಗೆಯಾಗಿ , ಗಂಡು ಮಗು ಜನಿಸಿದೆ ಘಟನೆ ನಡೆದಿದೆ.
ಈ ಘಟನೆಗೆ ಕಾರಣವಾದ ಆರೋಪಿಯನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ. ಅಪ್ರಾಪ್ತೆ ಜತೆಗೆ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ ಕಾಮುಕ. ವಿದ್ಯಾರ್ಥಿ ಗರ್ಭಿಣಿಯಾಗಿರುವ ವಿಷಯ ತಿಳಿದು ತಲೆಮರೆಸಿಕೊಂಡಿದ್ದ. ಗರ್ಭಿಣಿಯಾಗಿರುವ ವಿದ್ಯಾರ್ಥಿನಿ ಪೋಷಕರ ಬಳಿ ಆರೋಪಿಯ ಹೆಸರು ಹೇಳಿದ್ದಾಳೆ. ಆದರೆ ಅದಾಗಲೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಜಾತ್ರೆಯೊಂದರಲ್ಲಿ ಇರುವುದನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.