(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.16. ಭಾರತ ಹಾಗೂ ಪಾಕಿಸ್ತಾನದ ನಡುವಿನ ಎಲ್‌ಓಸಿಯಲ್ಲಿ ಛತ್ರಪತಿ ಶಿವಾಜಿಯ ಭವ್ಯ ಪ್ರತಿಮೆಯನ್ನು ಸ್ಥಾಪನೆ ಮಾಡುವುದಾಗಿ ‘ಅಮೀ ಪುಣೇಕರ್’ ಎನ್‌ಜಿಓ ಘೋಷಣೆ ಮಾಡಿದೆ. 2023ರ ಫೆಬ್ರವರಿ 14 ರಂದು ಎನ್‌ಜಿಓ ಈ ಪ್ರಕಟಣೆಯನ್ನು ನೀಡಿದ್ದು ಎಲ್‌ಓಸಿಯ ಎರಡು ಕಡೆ ಶಿವಾಜಿಯ ಪ್ರತಿಮೆಯನ್ನು ನಿರ್ಮಾಣ ಮಾಡುವುದಾಗಿ ಹೇಳಿದೆ.
ಶತ್ರುಗಳ ವಿರುದ್ಧ ಹೋರಾಡುವ ಸೈನಿಕರು ಪ್ರತಿನಿತ್ಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನೋಡುವ ಮೂಲಕ ಅವರ ಆದರ್ಶ ಮತ್ತು ನೈತಿಕ ಮೌಲ್ಯಗಳಿಂದ ಪ್ರೇರಣೆ ಪಡೆಯುತ್ತಾರೆ ಮತ್ತು ಅವರು ಹಿಂದೂ ರಾಜನ ಶೌರ್ಯವನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಶತ್ರುಗಳ ವಿರುದ್ಧ. ಹೋರಾಡುವ ಶಕ್ತಿಯನ್ನು ಪಡೆಯುತ್ತಾರೆ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಪ್ರತಿಮೆಯನ್ನು ಎಲ್‌ಓಸಿಯಲ್ಲಿ ಅಮೀ ಪುಣೇಕರ್ ಎನ್‌ಜಿಒ ಕಡೆಯಿಂದಲೇ ನಿರ್ಮಾಣ ಮಾಡಲಾಗುತ್ತದೆ. ವರದಿಗಳ ಪ್ರಕಾರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕಾಶ್ಮೀರದಲ್ಲಿ ಬರುವ ಗಡಿ ನಿಯಂತ್ರಣ ರೇಖೆಯ ಕಿರಣ್ ಮತ್ತು ತಂಗ್‌ಧರ್-ತಿಟ್ವಾಲ್ ಕಣಿವೆಗಳಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದೆ.