(ನ್ಯೂಸ್ ಕಡಬ) newskadaba.com ಬಿಜನೋರ್, ಫೆ.16. ಬಿಜನೋರ್ ಜಿಲ್ಲೆಯ ಓಂಪ್ರಕಾಶ್ ಎಂಬವರ ಪತ್ನಿ ತನ್ನ 10 ವರ್ಷದ ಮಗ ತಿಕೇಂದ್ರನೊಂದಿಗೆ ಮನೆಯ ಸಮೀಪದ ಕಬ್ಬಿನ ಗದ್ದೆಗೆ ತೆರಳಿದ್ದಳು. ಆಕೆ ಗದ್ದೆಯಲ್ಲಿ ಕೆಲಸ ಮಾಡುತ್ತಿರಬೇಕಾದರೆ, ಮಗ ಅಷ್ಟು ದೂರ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಚಿರತೆ ಮಗನನ್ನು ಕಚ್ಚಿ ಹೊತ್ತೊಯ್ದಿದೆ. ತಾಯಿ ಕೈಯಲ್ಲಿದ್ದ ಕಬ್ಬನ್ನು ಎಳೆಯುವ ಮೆಷಿನ್ ತೆಗೆದುಕೊಂಡು ಚಿರತೆಯತ್ತ ಓಡಿದ್ದಾಳೆ. ಮಗುವನ್ನು ಕಚ್ಚಲು ಯತ್ನಿಸಿದ್ದ ಚಿರತೆಯ ಮುಖಕ್ಕೆ, ಹೊಟ್ಟೆಗೆ ತನ್ನ ಕೈಯಲ್ಲಿದ್ದ ಮೆಷಿನ್‌ನಿಂದ ತಿವಿದಿದ್ದಾಳೆ. ಈ ಸಂದರ್ಭದಲ್ಲಿ ಚಿರತೆ ಮಹಿಳೆಯ ಮೇಲೂ ದಾಳಿ ಮಾಡಿದೆ. ಆದರೂ ಚಿರತೆಗೆ ಮೆಷಿನ್‌ನಿಂದ ಚುಚ್ಚುತ್ತಾ ಹೋಗಿದ್ದಾಳೆ. ಕೊನೆಗೆ ಚಿರತೆ ನೋವನ್ನು ತಾಳಲಾರದೆ ಮಗುವನ್ನು ಬಿಟ್ಟು ಕಾಡಿಗೆ ಓಡಿಹೋಗಿದೆ. ಮಗುವಿಗೆ ತೀವ್ರ ಗಾಯಗಳಾಗಿದೆ ಎಂದು ವರದಿಯಾಗಿದೆ.
ಬಿಜನೋರ್‌ನ ರೈತರು ಕಳೆದ ಹಲವು ತಿಂಗಳಿನಿಂದ ಚಿರತೆ ದಾಳಿಯ ಭೀತಿಯಲ್ಲೇ ಬದುಕುತ್ತಿದ್ದಾರೆ. ಹೀಗಿದ್ದೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.