(ನ್ಯೂಸ್ ಕಡಬ)newskadaba.com ಕೊಪ್ಪಳ, ಫೆ.16. ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ವೇಳೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿ 200 ಬಡ ಹೆಣ್ಣುಮಕ್ಕಳ ಖಾತೆ ತೆರೆಯುವ ಮೂಲಕ ಮಾದರಿಯಾಗಿದ್ದಾರೆ.
ಅಂಚೆ ಇಲಾಖೆಯಿಂದ ಮಾರ್ಚ್‌ನಲ್ಲಿ ನಿವೃತ್ತರಾಗಲಿರುವ ಉಪ ಅಂಚೆಪಾಲಕ ಯಲ್ಲಪ್ಪ ಕೋಳೂರು ಅವರು ತಮ್ಮ ನಿವೃತ್ತಿಯ ಸಮಾರಂಭವನ್ನು ವಿಶೇಷವಾಗಿ ಆಚರಿಸಿಕೊಳ್ಳಲಿದ್ದಾರೆ. ನಿವೃತ್ತಿಯ ಹಣದಿಂದ 200 ಬಡ ಹೆಣ್ಣುಮಕ್ಕಳಿಗೆ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಹಣ ಹಾಕುವ ಮೂಲಕ ಔದಾರ್ಯ ಮೆರೆದಿದ್ದಾರೆ. .50000 ಸಾವಿರ ದೇಣಿಗೆ ನೀಡುವ ಮೂಲಕ ಕೊಪ್ಪಳದ 200 ಹೆಣ್ಣುಮಕ್ಕಳ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಅನುವು ಮಾಡಿಕೊಟ್ಟಿದ್ದಾರೆ.