ಮೇಘಾಲಯದಲ್ಲಿ ಲಘು ಭೂ ಕಂಪನ!

(ನ್ಯೂಸ್ ಕಡಬ) newskadaba.com ಮೇಘಾಲಯ, ಫೆ.16. ಮೇಘಾಲಯದಲ್ಲಿ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ ಫೆಬ್ರವರಿ 16 ರಂದು ಬೆಳಿಗ್ಗೆ 9.26 ಕ್ಕೆ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಲ್ಲಿ ಭೂಕಂಪದ ಕೇಂದ್ರಬಿಂದುವು 46 ಕಿಮೀ ಆಳದಲ್ಲಿದೆ. ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ನಷ್ಟವಾಗಿಲ್ಲ ಎಂದು ವರದಿಯಾಗಿದೆ.

Also Read  ಡಿ.18ರಂದು ನಗರಪಾಲಿಕೆ ಬಜೆಟ್ ಸಮಾಲೋಚನಾ ಸಭೆ

 

error: Content is protected !!
Scroll to Top