ಬಾಲ್ಯವಿವಾಹ ಬಂಧನ ವಿನಾಶಕ್ಕೆ ದಾರಿ ➤ಅಸ್ಸಾಂ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ

(ನ್ಯೂಸ್ ಕಡಬ) newskadaba.com ಗುವಾಹತಿ, ಫೆ.16. ಬಾಲ್ಯವಿವಾಹ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ ಸಾವಿರಾರು ಮಂದಿಯನ್ನು ಬಂಧಿಸಿರುವ ಅಸ್ಸಾಂ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗುವಾಹತಿ ಹೈಕೋರ್ಟ್, “ಈ ಬಂಧನ ಕಾರ್ಯಾಚರಣೆ ಜನರ ಖಾಸಗಿ ಬದುಕಿನ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ” ಎಂದು ಹೇಳಿದೆ.

ಈ ಕುರಿತು ಒಂಬತ್ತು ಮಂದಿಗೆ ನಿರೀಕ್ಷಣಾ ಜಾಮೀನು ನೀಡಿರುವ ಹೈಕೋರ್ಟ್, “ಇವು ಕಸ್ಟಡಿಯಲ್ಲಿ ವಿಚಾರಣೆ ನಡೆಸುವ ಪ್ರಕರಣಗಳಲ್ಲ” ಎಂದು ಸ್ಪಷ್ಟಪಡಿಸಿದೆ. ಬಾಲ್ಯವಿವಾಹ ಸಂಬಂಧ ಪೋಕ್ಸೋ ಕಾಯ್ದೆಯಡಿ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸುವುದು ನಿಸ್ಸಂದೇಹವಾಗಿ ವಿಲಕ್ಷಣ ಕ್ರಮ” ಎಂದು ನ್ಯಾಯಮೂರ್ತಿ ಸುಮನ್ ಶ್ಯಾಮ್ ಮೌಖಿಕವಾಗಿ ಅಭಿಪ್ರಾಯಪಟ್ಟರು. “ಆರೋಪಿಗಳಲ್ಲಿ ಮಕ್ಕಳಿದ್ದಾರೆ; ಕುಟುಂಬದ ಸದಸ್ಯರಿದ್ದಾರೆ… ವೃದ್ಧರಿದ್ದಾರೆ… ಖಂಡಿತವಾಗಿಯೂ ಇದು ಕೆಟ್ಟ ಯೋಚನೆ” ಎಂದು ಅವರು ಸ್ಪಷ್ಟಪಡಿಸಿದರು ಎಂದು ವರದಿ ತಿಳಿಸಿದೆ.

Also Read  ರಾಜ್ಯಗಳ SC, ST ಒಳ ಮೀಸಲಾತಿಗೆ ಅಸ್ತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

 

error: Content is protected !!
Scroll to Top