ಹುಡುಗಿಯರನ್ನು ಚುಡಾಯಿಸಬೇಡ ಎಂದು ಬುದ್ದಿವಾದ ಹೇಳಿದ ವ್ಯಕ್ತಿಯನ್ನು ಅಪಹರಿಸಿ ಹತ್ಯೆ

(ನ್ಯೂಸ್ ಕಡಬ) newskadaba.com ಮೈಸೂರು, ಫೆ.16. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುದ್ಧಿವಾದ ಹೇಳಿದ ವ್ಯಕ್ತಿಯನ್ನೇ ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಗೆ ಮುನ್ನ ಕೊಲೆಯಾದ ವ್ಯಕ್ತಿಯನ್ನು ಆರೋಪಿಗಳು ಹೊತ್ತುಕೊಂಡು ಹೋಗಿದ್ದರು. ಸಯ್ಯದ್ ಮನ್ಸೂರ್ (32) ಕೊಲೆಯಾಗಿದ್ದ ದುರ್ದೈವಿ ಎಂದು ತಿಳಿದುಬಂದಿದೆ.

ಮೈಸೂರಿನ ಕಲ್ಯಾಣಗಿರಿ ನಿವಾಸಿ ಮನ್ಸೂರ್, ಭಾನುವಾರದಿಂದ ನಾಪತ್ತೆಯಾಗಿದ್ದರು. ಈ ಕುರಿತು ಎನ್ ಆರ್ ಮೊಹಲ್ಲಾದ ಜಬೀ ಸೈಯದ್ ಝೈನುಲ್ಲಾ ವಿರುದ್ದ ಪ್ರಕರಣ ದಾಖಲಾಗಿತ್ತು. ಜಬೀ ಹುಡಗಿಯರನ್ನು ಚುಡಾಯಿಸುತ್ತಿದ್ದ. ಹೀಗಾಗಿ ಇದು ತಪ್ಪು ಎಂದು ಮನ್ಸೂರ್, ಜಬೀಗೆ ಬುದ್ದಿವಾದ ಹೇಳಿದ್ದ. ಇದೇ ಕಾರಣಕ್ಕೆ ಸ್ನೇಹಿತರ ಜೊತೆ ಸೇರಿ ಅಪಹರಿಸಿ ಮನ್ಸೂಸ್ ಕೊಲೆ ಮಾಡಿ ಪಾಂಡವಪುರ ಬಳಿ ಶವ ಎಸೆದಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಎನ್​ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಆನ್‌ಲೈನ್ ನಲ್ಲಿ ಹಣ ಹೂಡಿಕೆ ಮಾಡಿಸಿ ವಂಚನೆ- ಪ್ರಕರಣ ದಾಖಲು

 

error: Content is protected !!
Scroll to Top