ಜನಸೇವೆ ಮಾಡಲು ರಾಜಕೀಯ ಆಯ್ದುಕೊಂಡ ಜಡ್ಜ್!!

(ನ್ಯೂಸ್ ಕಡಬ) newskadaba.com ಗದಗ, ಫೆ.16. ನ್ಯಾಯಾಧೀಶ ಹುದ್ದೆಗೆ ಗುಡ್​ಬೈ, ರಾಜಕೀಯಕ್ಕೆ ಜೈ. ಜಡ್ಜ್​​ ಜನಸೇವೆ ಮಾಡಲು ರಾಜಕೀಯ ಆಯ್ದುಕೊಂಡಿದ್ದಾರೆ. ಸಿವಿಲ್‌ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿ ಗದಗದ JMFC ಪ್ರಧಾನ ಸಿವಿಲ್ ನ್ಯಾಯಾಧೀಶ ಸುಭಾಷ್ ಚಂದ್ರ ರಾಥೋಡ್​ ಜೆಡಿಎಸ್ ಸೇರಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದು,  ಸುಭಾಷ್ ಚಂದ್ರ ರಾಥೋಡ್​ ಜೆಡಿಎಸ್​ನಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂದು ವರಿಯಾಗಿದೆ.

ರಾಥೋಡ್​ ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದವರಾಗಿದ್ದಾರೆ.  ಕಾರ್ಮಿಕರ ಕಾನೂನು ವಿಷಯದಲ್ಲಿ ಪಿಎಚ್‌ಡಿ‌ ಪಡೆದಿರುವ ರಾಥೋಡ್ ಇದೀಗ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಜನ ಸೇವೆ ಮಾಡಲು ತಯಾರಿ ನಡೆಸಿದ್ದಾರೆ.

Also Read  ಭೀಕರ ರಸ್ತೆ ಅಪಘಾತ ➤‌ ಮೂವರು ಮೃತ್ಯು

 

error: Content is protected !!
Scroll to Top