ಸೇನೆಯ ನೂತನ ಉಪ ಮುಖ್ಯಸ್ಥರಾಗಿ ಸುಚೇಂದ್ರಕುಮಾರ್ ನೇಮಕ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.16. ಲೆಫ್ಟಿನೆಂಟ್​  ಜನರಲ್ ಎಂ.ವಿ.​ ಸುಚೇಂದ್ರ ಕುಮಾರ್ ಅವರನ್ನು ಭಾರತೀಯ ಸೇನೆಯ ನೂತನ ಉಪ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ಇಲ್ಲಿವರೆಗೆ ಸೇನೆಯ ಉಪ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಜನರಲ್​ ಬಿ.ಎಸ್​. ರಾಜು ಅವರನ್ನು ಸೇನೆಯ ನೈಋತ್ಯ ವಲಯದ ಕಮಾಂಡರ್​ ಆಗಿ ನಿಯೋಜನೆ ಮಾಡಲಾಗಿದೆ. ಸೇನೆಯ ನೈಋತ್ಯ ವಲಯದ ಕಮಾಂಡರ್ ಲೆಫ್ಟಿನೆಂಟ್​ ಜನರಲ್​ ಎ.ಎಸ್​.ಭಿಂದರ್​ ಅವರು ಫೆ. 28ರಂದು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಬಿ. ಎಸ್. ರಾಜು ನೇಮಕಗೊಂಡಿದ್ದಾರೆ.

Also Read  ಹಿಂಸಾಚಾರ ಪ್ರಕರಣ: ಇಬ್ಬರ ಮೃತದೇಹ ಪತ್ತೆ, 6 ಮಂದಿ ನಾಪತ್ತೆ

 

error: Content is protected !!
Scroll to Top