(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.16. ಎರಡೂವರೆ ವರ್ಷಗಳ ಹಿಂದೆ ಈ ಕೋವಿಡ್-19 ಸಾಂಕ್ರಾಮಿಕ) ರೋಗದ ಹಾವಳಿ ಶುರುವಾದಾಗ ಪಟ್ಟಣಗಳಲ್ಲಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಂತಹ ಅನೇಕ ಜನರು ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದರು.
ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದ ಅನೇಕ ಜನರು ಬೇರೆ ಯಾವ ಕೆಲಸಗಳನ್ನು ಹುಡುಕಿಕೊಳ್ಳದೆ ಕೃಷಿಯತ್ತ ಮುಖ ಮಾಡಿದ್ದು ನಮಗೆಲ್ಲಾ ಗೊತ್ತೇ ಇದೆ. ಹೀಗೆ ಅನೇಕ ವಿದ್ಯಾವಂತ ಯುವಕರು ತಮ್ಮ ಹಳ್ಳಿಗಳಲ್ಲಿ ವಿನೂತನ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಪ್ರಗತಿಪರ ರೈತರಾಗುವ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.