ಭಾರೀ ಬೆಂಕಿ ಅವಘಡ… ➤‌ ಧಗಧಗನೆ ಹೊತ್ತಿ ಉರಿದ ಕೋಟಿ-ಕೋಟಿ ಮೌಲ್ಯದ ಕಾರು…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.16. ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಕೋಟಿ-ಕೋಟಿ ಮೌಲ್ಯದ ಕಾರುಗಳು ಧಗಧಗನೆ ಹೊತ್ತಿ ಉರಿದಿದೆ. ರಾಮಮೂರ್ತಿ ನಗರದಲ್ಲಿ ಹೈಎಂಡ್​ ಕಾರು​ಗಳು ಭಸ್ಮವಾಗಿದ್ದು, ಕಸ್ತೂರಿನಗರದ ಕಾರು ಗ್ಯಾರೇಜ್​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಚಾಂದ್ ಪಾಷ, ತಬರೇಜ್​​ ಪಾಷ ಎಂಬುವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು, ಈ ಗ್ಯಾರೇಜ್​​​​ ನಲ್ಲಿ ಐಷಾರಾಮಿ ಕಾರುಗಳ ರಿಪೇರಿ ಮಾಡಲಾಗುತ್ತಿತ್ತು. 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಕರಕಲಾಗಿದೆ ಎಂದು ವರದಿ ತಿಳಿಸಿದೆ.
ಗ್ಯಾರೇಜ್​​ನಲ್ಲಿ ಸ್ಟಾಟರ್ ಕೆಲಸ ಮಾಡುವಾಗ  ಬೆಂಕಿ ಹೊತ್ತಿಕೊಂಡಿದೆ, ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಡಬದಲ್ಲಿ ಬಗೆಹರಿಯದ ಬಿಎಸ್ಎನ್ಎಲ್ ನೆಟ್ ವರ್ಕ್ ಸಮಸ್ಯೆ ► ಗ್ರಾಹಕರಿಂದ ಪ್ರತಿಭಟನೆಯ ಕರೆಘಂಟೆ

 

error: Content is protected !!
Scroll to Top