ಜಾತಿ ನಿಂದನೆ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಮುಂಬೈ,ಫೆ.15. ಐಐಟಿ ಬಾಂಬೆಯಲ್ಲಿ18 ವರ್ಷದ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಜಾತಿ ನಿಂದನೆಯೇ ಇದಕ್ಕೆ ಕಾರಣ ಎಂದು ಆತನ ಕುಟುಂಬ ಹೇಳಿದೆ. ತನ್ನ ಜಾತಿಯಿಂದಾಗಿ ಸ್ನೇಹಿತರು ಕೂಡಾ ಅವಮಾನಿಸುತ್ತಿದ್ದರು ಎಂದು ಸಹೋದರಿ ಮತ್ತು ಅತ್ತೆಯೊಂದಿಗೆ ಈತ ಹೇಳಿದ್ದ ಎಂದು ವಿದ್ಯಾರ್ಥಿಯ ಕುಟುಂಬವು ಎನ್‌ಡಿಟಿವಿಗೆ ತಿಳಿಸಿದೆ. ಐಐಟಿ ಬಾಂಬೆಯ ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಹೇಳಿದ್ದು, ದರ್ಶನ್ ಸೋಲಂಕಿ ಎಂಬ ವಿದ್ಯಾರ್ಥಿಯ ಕುಟುಂಬವು ತಮ್ಮ ಮಗ ಕಿರುಕುಳ ಅನುಭವಿಸಿದ್ದಾನೆ ಎಂದು ಹೇಳಿದೆ.

“ಕಳೆದ ತಿಂಗಳು ಅವ ಊರಿಗೆ ಬಂದಿದ್ದಾಗ ಅಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಎಂದು ಅಪ್ಪ ಅಮ್ಮನಲ್ಲಿ ಹೇಳಿದ್ದ. ಈತ ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಅವರ ಸ್ನೇಹಿತರಿಗೆ ತಿಳಿದಿತ್ತು, ಆದ್ದರಿಂದ ಅವರ ವರ್ತನೆ ಬದಲಾಯಿತು. ಅವರು ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ಅವನೊಂದಿಗೆ ಸುತ್ತಾಡುವುದನ್ನು ನಿಲ್ಲಿಸಿದರು ಎಂದು ಅವರ ಸಹೋದರಿ ಜಾನ್ವಿ ಸೋಲಂಕಿ ಹೇಳಿದ್ದಾರೆ ಎಂದು ವರದಿಯಾಗಿದೆ.

Also Read  ಮದುಮಲೈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ಭೇಟಿ ಸಾಧ್ಯತೆ

 

error: Content is protected !!
Scroll to Top