ದುಬೈನಲ್ಲಿ 2026ಕ್ಕೆ ಹಾರುವ ಟ್ಯಾಕ್ಸಿ!

(ನ್ಯೂಸ್ ಕಡಬ)newskadaba.com  ದುಬೈ, ಫೆ, 15. ದುಬೈನಲ್ಲಿ 2026ರ ವೇಳೆಗೆ ಹಾರುವ ಟ್ಯಾಕ್ಸಿಗಳು ಮತ್ತೆ ಸಕ್ರಿಯವಾಗಿರಲಿವೆ ಎಂದು ರಾಜರ ಆಡಳಿತದ ಸರ್ಕಾರ ಘೋಷಿಸಿದೆ. ಈ ಬಾರಿ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್​ನ ಜಾಬಿ ಏವಿಯೇಷನ್ ತಯಾರಿಸಿದ ಆರು -ರೋಟರ್ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳು ಹಾರಾಟ ನಡೆಸಲಿವೆ ಎಂದು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕೌಮ್ ಹೇಳಿದ್ದಾರೆ.

ಆ ಬಗ್ಗೆ ಸ್ಪಷ್ಟ ವಿವರಣೆಯೊಂದಿಗೆ ವಿಡಿಯೋವನ್ನು ಸಹ ಬಿಡುಗಡೆ ಮಾಡಲಾಗಿದೆ. ನಗರದ ಪ್ರಮುಖ ಹೆಗ್ಗುರುತು ಸಮೀಪದಲ್ಲಿ ಏರ್ ಟ್ಯಾಕ್ಸಿಗಳಿಗಾಗಿ ನಾಲ್ಕು ವರ್ಟಿಪೋರ್ಟ್ ಗಳನ್ನು ಬುರ್ಜ್ ಖಲೀಫಾ, ದುಬೈ ಮರೀನಾ, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪಾಮ್ ಜುಮೇರಾ ಬಳಿಯ ಡೌನ್​ಟೌನ್​ನಲ್ಲಿ ತೆರೆಯಲಾಗುತ್ತಿದೆ.

Also Read  ಡ್ರಗ್ಸ್ ಪ್ರಕರಣ : ವಿಚಾರಣೆಗೆ ಹಾಜರಾದ ನಟಿ ದೀಪಿಕಾ ಪಡುಕೋಣೆ

 

error: Content is protected !!
Scroll to Top