ಲಿವ್-ಇನ್ ಸಂಗಾತಿಯ ಹತ್ಯೆ ➤  ಮೃತದೇಹವನ್ನು ಹಾಸಿಗೆಯೊಳಗೆ ತುಂಬಿಸಿಟ್ಟ ಪಾಗಲ್ ಪ್ರೇಮಿ.!

(ನ್ಯೂಸ್ ಕಡಬ)newskadaba.com  ಮಹಾರಾಷ್ಟ್ರ, ಫೆ. 15. ಪ್ರಿಯಕರನೊಬ್ಬ ಲಿವ್-ಇನ್-ಟುಗೆದರ್ ಸಂಬಂಧದಲ್ಲಿದ್ದ ಪ್ರೇಯಸಿಯನ್ನು ಕೊಂದು, ಆಕೆಯ ಮೃತದೇಹವನ್ನು ಹಾಸಿಗೆಯಲ್ಲಿ ತುಂಬಿಸಿಟ್ಟಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಕೊಲೆ ಆರೋಪಿ ಹಾರ್ದಿಕ್ ಶಾ(27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಮಹಾರಾಷ್ಟ್ರದ ನಲಸೋಪಾರ ಎಂಬಲ್ಲಿ ನಡೆದಿದೆ. ಪಾಲ್ಘರ್ ಜಿಲ್ಲೆಯ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾರ್ದಿಕ್ ಶಾ ನಲಸೋಪಾರಾದ ಸೀತಾ ಸದನ್ ಸೊಸೈಟಿ ಎಂಬಲ್ಲಿ ಕೊಲೆಯಾಗಿರುವ ಮೇಘ ಧನ್ ಸಿಂಗ್(35) ಎಂಬಾಕೆಯೊಂದಿಗೆ ವಾಸವಾಗಿದ್ದ. ನೆರೆಹೊರೆಯ ಮಂದಿಯಲ್ಲಿ ನಾವಿಬ್ಬರು ದಂಪತಿಗಳಾಗಿದ್ದು ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಭೂ ವ್ಯವಹಾರ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Also Read  ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ➤  ಮಾದಕ ವಸ್ತು ಸೇವನೆ ಬೆಳಕಿಗೆ

 

error: Content is protected !!
Scroll to Top